ಪೋಸ್ಟ್‌ಗಳು

ಜನವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಂಗನ್ಸಿದ್ದು

 ಗಂಡು ಮಗವಿಗೂ ಹೆಣ್ಣು ಕರುವಿಗೂ ಯಾಕಿಷ್ಟು ಪ್ರೀತಿ ಇವೆರಡರ ನಡುವೆ ಬೇಡವಾದವು ಹೆಣ್ಣುಮಗು ಗಂಡುಗರು ಹುಟ್ಟಿದ ದಿನವೇ ಎಲ್ಲರ ಶಾಪತಾಪಗಳಿಗೆ ಒಳಗಾಗಿ ಬಡವಾದವು ಹುಟ್ಟಿರುವುದು ಹೆಣ್ಣಾದರೇನು ಗಂಡಾದರೇನು, ಜೀವವಲ್ಲವೇ? ಬೇರೆ ದಾರಿಯಿಲ್ಲದೆ ಸಾಕಬೇಕಷ್ಟೆ ಎಂದು ಗೊಣಗಿ ಮೇವು ಹಾಕಿದರು ಯಾಕದರು ಹುಟ್ಟಿತೋ ಅನಿಷ್ಟ ಎಂದು ಮೂತಿಮುರಿದರು ಕರುಯಿಲ್ಲದೆ ಹಾಲಿಲ್ಲ ಹುಟ್ಟಿದ ಮಗು ಕಾಣದಿದ್ದರೆ ಸಮಾಜ ಒಪ್ಪಲ್ಲ,, ಇಲ್ಲದಿದ್ದರೆ ಇ ತರಹದ ಜೀವಿಗಳು ಭೂಮಿಯ ಮೇಲೇಯೇ ಇರುತ್ತಿರಲಿಲ್ಲ ಸಾಕುತ್ತಾ ಬಂದರು ನೀಡಲು ಕಟುಕನಿಗೋ? ಊರ ದೇವಿಗೋ? ಏನೋ ಗೆದ್ದಂತಹ ಖುಷಿ ಹೇಗೋ ಮನೆಬಿಟ್ಟಾರಾಯಿತು ಅನಿಷ್ಟಗಳು ಒಮ್ಮೊಮ್ಮೆ ಅನಿಸುತ್ತದೆ ಹೆಣ್ಣು ಮಗುವೇ ಪರವಾಗಿಲ್ಲ ಗಂಡುಕರುವಿಗಿಂತ ಹುಟ್ಟಿನಿಂದಲೇ ತಾತ್ಸಾರಕ್ಕೆ ಒಳಗಾದವನಿಗೆ ಸಾವು ಎಂದಿದ್ದರೂ ನಿಶ್ಚಿತ.. ಹೌದು ನಾವು ಕೂಡ ಮೇಲೆಳಿದ ಸಮಾಜದ ಭಾಗವೆ!. ನಮ್ಮಲ್ಲೂ ಇದೆ ಇಂತಹದ್ದೆ ಎಷ್ಟೋ ಆಲೋಚನೆ ಇರದಿದ್ದರೆ ನಿಮ್ಮಂತವರಿಂದನೆ ಮಮತೆ ವಾತ್ಸಲ್ಯ ಇನ್ನೂ ಉಳಿದಿದೆ.. ಹುಟ್ಟುವ ಮಗು ಗಂಡಾಗಲಿ ಹಾಕುವ ಕರು ಹೆಣ್ಣಾಗಲಿ.                                       -ಮಿಥುನ್ ಪ್ರೀತಮ್