ಆ ಕಣ್ಣುಗಳು
ಅಯ್ಯೋ ಟೈಮ್ ಆಗೋಯ್ತಾ, ನಂದ್ ದಿನ ಇದೆ ಆಗೋಯ್ತು ಅಂತ ಅರ್ಧಂಬರ್ಧ ತಿಂಡಿ ತಿಂದು ಒಂದೇ ಉಸಿರಲ್ಲಿ ಬಸ್ಟ್ಯಾಂಡ್ ಕಡೆ ಓಡಿದೆ, ಇ ಬಸಗಳ್ ಕಥೆ ಕೇಳ್ಬೇಕ ಬೇಗ ಬಂದು ಎಷ್ಟೊತ್ತು ಕಾಯಿದರು ಬರಲ್ಲ,ಸೆಕೆಂಡ್ ಲೇಟ್ ಆದ್ರೂ ನೆಕ್ಸ್ಟ್ ಸ್ಟಾಪ್ನಲ್ಲಿರ್ತವೆ, ಅಂತು ಇಂತು ಕಷ್ಟಪಟ್ಟು ಬಸ್ಟ್ಯಾಂಡ್ ತಲುಪಿದೆ, ಯಥಾಪ್ರಕಾರ ಬಸ್ ನಮ್ಮ ಸ್ಟ್ಯಾಂಡ್ ಬಿಟ್ಟು ಆಗಷ್ಟೆ ಹೋಗ್ತಿತ್ತು, ಹ್ಮ್ ನಂಗೇನ್ ಹೊಸದಲ್ಲ ಬಿಡಿ ಓಡೋ ಬಸ್ ಹತ್ತೋದು ಕಾಲೇಜ್ ಡೇಸ್ ಇಂದಲೇ ಅಭ್ಯಾಸ ಆಗಿದೆ, ಬ್ಯಾಗ್ ನ ಟೈಟ್ ಮಾಡ್ಕಂಡು ಓಡಿ ಬಸ್ ಹತ್ತಿದೆ ಹೆಂಗೋ ಮುಂದೆನೇ ಸೀಟ್ ಖಾಲಿಯಿತ್ತು ಕೂತ್ಕಂಡು ಪರ್ಸ್ ಯಿಂದ ಪಾಸ್ ತಗ್ದು ಕಂಡಕ್ಟರ್ ಗೆ ತೋರುಸ್ದೆ, ಬೆಲ್ಟ್ ಲೂಸ್ ಮಾಡ್ಕಂಡು ತೂ ಫಸ್ಟ್ ಇ ಹೊಟ್ಟೆ ಕರುಗಿಸಬೇಕು ಅಂತ ಕಿಟಕಿ ತಗ್ದೆ, ಅಸ್ಟ್ರಲ್ಲಿ ನೆಕ್ಸ್ಟ್ ಸ್ಟಾಪ್ ಬಂತು ಬಸ್ ನಿಂತೊಡನೆ ಯಾರೋ ೩ ಜನ ಇಳಿದ್ರು ೨ ಹತ್ಕೊಂಡ್ರು ಬಸ್ ಹೊರಡ್ತು ಯಾರೋ ಒಬ್ಬ ಹುಡುಗಿ ನನ್ನಂತೆಯೆ ಓಡೋ ಬಸ್ ಹತ್ತಿದಳು, ಉದ್ದ ಕೂದಲು ಬಿಳಿ ಮೈ ಬಣ್ಣ ಕೆಂಪು ಚೂಡಿದಾರ ಹಣೆಗೆ ದೇವರ ಕುಂಕುಮ ಅಬ್ಬಾ ಇಂತ ಕಾಲದಲ್ಲೂ ಇಂತ ಹುಡುಗಿನ ಅಂತ ಯೋಚಿಸೋದರೊಳಗೆ ನನ್ನ ಪೂರ್ತಿ ದೃಷ್ಟಿ ಅವಳ ಕಣ್ಣುಗಳ ಕಡೆ ಹೋಯಿತು, ಬಿಳಿಕೊಳದೊಳಗೆ ಕಪ್ಪು ಮೀನಿನಂತೆ ಕಣ್ಣುಗುಡ್ಡೆಗಳು, ಕಣ್ರೆಪ್ಪೆಗೆ ಪೂರ್ತಿ ಮುಚ್ಚಲು ಕಷ್ಟವಾಗುವಂತಹ ದೊಡ್ಡ ಕಣ್ಣುಗಳು, ಉಫ್... ರೆಪ್...