ಮತ್ತೊಮ್ಮೆ ಪ್ರೀತಿಸೋಣ
ಇಲ್ಲಿಗ್ ಮೂರ್ ವರ್ಷ ಆಯ್ತು ಇವ್ಳನ ಮದ್ವೆ ಆಗಿ, ಅದ್ಯಾಕೋ ನಮ್ಮಲ್ಲಿದ್ದ ಆಸೆ ಕನಸುಗಳೆಲ್ಲಾ ಪ್ರತಿ ವರ್ಷನೂ ಕಡಿಮೆ ಆಗ್ತಾ ಬರ್ತಿದೆ, ತಪ್ಪು ಯಾರಿಂದ ಶುರು ಆಯ್ತು ಅಂತ ಹುಡ್ಕೋದ್ಕಿಂತ ನಾವಿಬ್ಬರೂ ಸಮಾನಭಾಗಿಗಳು, ಹೀಗಂತ ನಮ್ ಮಧ್ಯೆ ಜಗಳ ಕಿತ್ತಾಟ ಏನ್ ಆಗಿರ್ಲಿಲ್ಲ ಒಂತರಾ ಜಗಳ ಆಗಿದಿದ್ದರೂ ಇಷ್ಟೊತ್ತಿಗೆ ಮತ್ತೆ ಒಂದಾಗ್ತಿದ್ವೇನೋ ಆದರೆ ನಮ್ ಮಧ್ಯೆ ಕಾಣದೆ ಇರೋ ಗೋಡೆ ಬೆಳೆದಿದೆ, ಇವ್ಳ್ ಜೊತೆ ಮುಂದಿನ ಜೀವನ ಸವೆಸೋದು ಬಾವಿ ಒಳಗೆ ಸೂಜಿ ಹುಡ್ಕೋ ತರ ಅನ್ನುಸ್ತಿದೆ ಹಂಗಂತ ಬಿಟ್ಟೋಗಕು ಆಗ್ತಿಲ್ಲ ಒಂತರ ನಾವಿಬ್ಬರೂ ತಾಳಿ ಅನ್ನೋ ಬೇಡಿ ಹಾಕೊಂಡು ಮದ್ವೆ ಅನ್ನೋ ಬಂಧಿಖಾನೆ ಒಳಗಿರೋ ಖೈದಿಗಳು, ಎಲ್ಲಾರ್ ಲೈಫ್ ಕೂಡ ಹೀಗೇನಾ? ಹೊರಗಿನ ಸಮಾಜಕ್ಕೆ ಹೆದರಿ ಜೊತೆಗಿರೋ ನಾಟಕನಾ? ಇವ್ಳನ ನಾನೇ ಕೇಳಿದ್ದೆ ನಿಂಗ್ ನಾನಿಷ್ಟ ಆದ್ನ ಮದ್ವೆ ಆಗೋಕೆ ಏನು ಅಭ್ಯಂತರವಿಲ್ವಾ ಅಂತ, "ನನ್ನ ನಿನ್ನ್ ಮಗು ತರ ನೆಡುಸ್ಕಳಂಗದ್ರೆ ಮಾತ್ರ ಮದ್ವೆ" ಅನ್ನೋ condition ಹಾಕಿದ್ಲು, ಎಲ್ಲಾ ಪಿಲ್ಮ್ ನಲ್ಲಿ ತೋರ್ಸೋತರ ಮದ್ವೆ ಆದ ಮೊದಲ ದಿನಗಳಲ್ಲಿmovie shopping, road side food ವಾರಾಂತ್ಯಕ್ಕೆ ಸಾಮಾನ್ಯ ಆಗಿದ್ವು, ನಮ್ಮಿಗ್ ಮದ್ವೆ ಆಗಿದ್ರೂ ನಾವಿಬ್ಬರೂ ಪ್ರೇಮಿಗಳ್ ತರ ಇದ್ವು, ಬೆಳಗ್ಗೆ ಆದರೆ ಅವ್ಳ್ ಮುದ್ದಾದ್ ಬೈಗುಳ ಕೇಳ್ಬೇಕಾದ್ರೆ, ಸ್ನಾನ ಮಾಡಿ ತಲೆ ಕೂದಲಲ್ಲಿದ್ದ ನೀರ್ ನ ನನ್ನ್ ಮೇಲೆ ಸಿಡಿ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ