ಮತ್ತೊಮ್ಮೆ ಪ್ರೀತಿಸೋಣ
ಇಲ್ಲಿಗ್ ಮೂರ್ ವರ್ಷ ಆಯ್ತು ಇವ್ಳನ ಮದ್ವೆ ಆಗಿ, ಅದ್ಯಾಕೋ ನಮ್ಮಲ್ಲಿದ್ದ ಆಸೆ ಕನಸುಗಳೆಲ್ಲಾ ಪ್ರತಿ ವರ್ಷನೂ ಕಡಿಮೆ ಆಗ್ತಾ ಬರ್ತಿದೆ, ತಪ್ಪು ಯಾರಿಂದ ಶುರು ಆಯ್ತು ಅಂತ ಹುಡ್ಕೋದ್ಕಿಂತ ನಾವಿಬ್ಬರೂ ಸಮಾನಭಾಗಿಗಳು, ಹೀಗಂತ ನಮ್ ಮಧ್ಯೆ ಜಗಳ ಕಿತ್ತಾಟ ಏನ್ ಆಗಿರ್ಲಿಲ್ಲ ಒಂತರಾ ಜಗಳ ಆಗಿದಿದ್ದರೂ ಇಷ್ಟೊತ್ತಿಗೆ ಮತ್ತೆ ಒಂದಾಗ್ತಿದ್ವೇನೋ ಆದರೆ ನಮ್ ಮಧ್ಯೆ ಕಾಣದೆ ಇರೋ ಗೋಡೆ ಬೆಳೆದಿದೆ, ಇವ್ಳ್ ಜೊತೆ ಮುಂದಿನ ಜೀವನ ಸವೆಸೋದು ಬಾವಿ ಒಳಗೆ ಸೂಜಿ ಹುಡ್ಕೋ ತರ ಅನ್ನುಸ್ತಿದೆ ಹಂಗಂತ ಬಿಟ್ಟೋಗಕು ಆಗ್ತಿಲ್ಲ ಒಂತರ ನಾವಿಬ್ಬರೂ ತಾಳಿ ಅನ್ನೋ ಬೇಡಿ ಹಾಕೊಂಡು ಮದ್ವೆ ಅನ್ನೋ ಬಂಧಿಖಾನೆ ಒಳಗಿರೋ ಖೈದಿಗಳು,
ಎಲ್ಲಾರ್ ಲೈಫ್ ಕೂಡ ಹೀಗೇನಾ? ಹೊರಗಿನ ಸಮಾಜಕ್ಕೆ ಹೆದರಿ ಜೊತೆಗಿರೋ ನಾಟಕನಾ? ಇವ್ಳನ ನಾನೇ ಕೇಳಿದ್ದೆ ನಿಂಗ್ ನಾನಿಷ್ಟ ಆದ್ನ ಮದ್ವೆ ಆಗೋಕೆ ಏನು ಅಭ್ಯಂತರವಿಲ್ವಾ ಅಂತ, "ನನ್ನ ನಿನ್ನ್ ಮಗು ತರ ನೆಡುಸ್ಕಳಂಗದ್ರೆ ಮಾತ್ರ ಮದ್ವೆ" ಅನ್ನೋ condition ಹಾಕಿದ್ಲು, ಎಲ್ಲಾ ಪಿಲ್ಮ್ ನಲ್ಲಿ ತೋರ್ಸೋತರ ಮದ್ವೆ ಆದ ಮೊದಲ ದಿನಗಳಲ್ಲಿmovie shopping, road side food ವಾರಾಂತ್ಯಕ್ಕೆ ಸಾಮಾನ್ಯ ಆಗಿದ್ವು, ನಮ್ಮಿಗ್ ಮದ್ವೆ ಆಗಿದ್ರೂ ನಾವಿಬ್ಬರೂ ಪ್ರೇಮಿಗಳ್ ತರ ಇದ್ವು, ಬೆಳಗ್ಗೆ ಆದರೆ ಅವ್ಳ್ ಮುದ್ದಾದ್ ಬೈಗುಳ ಕೇಳ್ಬೇಕಾದ್ರೆ, ಸ್ನಾನ ಮಾಡಿ ತಲೆ ಕೂದಲಲ್ಲಿದ್ದ ನೀರ್ ನ ನನ್ನ್ ಮೇಲೆ ಸಿಡಿಸ್ಬೇಕಾದ್ರೆ, ಅವಳು ಏನೋ ಕೆಲಸ ಮಾಡೋವಾಗ ಅವಳ್ನಾ ಹಿಂದೆಯಿಂದ ತಬ್ಬಿ ಹಿಡಿಬೇಕಾದರೆ, ನನ್ ಪೋಲಿ ಮಾತಿಗೆ ಅವ್ಳು ನಂಗ್ ಹೊಡಿಬೇಕಾದ್ರೆ ನನ್ನಲ್ಲಿ ಆಗ್ತಿದ್ ಖುಷಿ ಗೆ ಎಲ್ಲೇನೆ ಇರ್ಲಿಲ್ಲ, ಸೋಫಾ ಮೇಲೆ ಕೂತು ಒಂದೇ ರಿಮೋಟ್ ಗೆ ಕಿತ್ತಾಡ್ತಿದ್ವು ಇವೆಲ್ಲಾ ಈಗ ನೆನಪಷ್ಟೇ,
ಖುಷಿ ಸಂತೋಷ ಅನ್ನೋದು ಮದ್ವೆ ಆದ ಹೊಸತರಲ್ಲಿ ಸಿಗೋ short time ಆಫರ್ ಗಳ? ಮದ್ವೆ ಅನ್ನೋದು ನಿಜವಾಗ್ಲೂ ಕಡ್ಡಾಯನ! ನಾನ್ ಕಂಡಿದ್ದ ಮದ್ವೇ ಅನ್ನೋ ಪರಿಕಲ್ಪನೆ ಇಷ್ಟ್ ಬೇಗ ಮುಗಿತಾ! ಮದ್ವೆ ಆದ ಮೊದಲ ದಿನಗಳು ಈಗ ಸಮಾಧಿ ಸೇರಿವೆ, ಇಗ ನಮ್ ಮಧ್ಯೆ ಮಾತು ಅನ್ನೋದು ಅಪರೂಪಕ್ ಬೀಳೋ ಆಲಿಕಲ್ಲಾಗಿದೆ, ಸೋಫಾ ಮೇಲೆ ಇದ್ರೂ ಮೈ ಕೈ ಟಚ್ ಕೂಡ ಆಗಲ್ಲ ಒಬ್ಬರತ್ರ ರಿಮೋಟ್ ಇನ್ನೊಬ್ಬರ ಕೈಲಿ ಮೊಬೈಲ್, ನಂಗ್ ಕೊಟ್ಟಿದ್ ಆಫರ್ ಗಳೆಲ್ಲಾ ಮುಗ್ದೋದ್ವಾ? ಅಥವಾ ಮದ್ವೆಗೂ ಒಂದ್ expiry date ಇದ್ಯಾ? ಆಗಿದಿದ್ದರೆ ಗಟ್ಟಿ ಸಂಬಂಧಗಳೇ ಇರ್ತಿರ್ಲಿಲ್ಲಾ ಅಲ್ವಾ,
ಸಲಿಗೆ ಹೋಗಿ ಸಂಶಯ ಆಗಿದ್ದಾದರೂ ಯಾವಾಗ, ನಾನ್ ಮಾಡಿದ್ದೆ ಸರಿ ಅನ್ನೋ ಭಾವ ಹೋಗೋದಾದರೂ ಯಾವಾಗ ಇ ತರ ನೂರಾರು ಪ್ರಶ್ನೆಗಳಿದವೆ ಆದರೆ ಉತ್ತರ ಕೊಡ್ಕೊ ಬೇಕಾಗಿರೋ ನಾನೆ ಪ್ರಶ್ನೆ ಆಗಿದಿನಿ,
ಸಂಸಾರದ ಕೊಂಡಿ ಕಳಚಿ ಇನ್ನೊಬ್ಬಳ ಬಳಿ ಹೋಗ್ಬೇಕು ಅಂತಾ ಎಷ್ಟೋ ಸರಿ ಅನ್ಸಿರು ಕೂಡ ದೇಹ ಸುಖಕ್ಕೆ ಯಾಕ್ ಒತ್ತು ಕೊಡ್ಬೇಕು ಅಂತ ಸುಮ್ನಾಗಿದಿನಿ, ನನ್ನಲ್ಲೂ ಆಸೆ ಇದೆ ಆದರೆ ಇವಳಿಗೆ ಮೋಸ ಮಾಡೋವಷ್ಟು ಅಲ್ಲ,
ಮದ್ವೆ ಆದ್ಮೇಲೆ friends ದೂರ ಆದ್ರೂ ಆದರೆ ಹೆಂಡ್ತಿ ನಂಗ್ ಫ್ರೆಂಡ್ ಆಗ್ಲಿಲ್ಲಾ, ನನ್ನಲ್ಲಿರೋ ತರ ಯೋಚನೆ ಅವಳಲ್ಲೂ ಬಂದಿರ್ಬಹುದು ಅಲ್ವಾ, ನಾವ್ ಒಂದಾಗೋಕೆ ಮಾಡಿರೋ ಪ್ರಯತ್ನ ಎಲ್ಲಾ ವೇಸ್ಟ್ ಆಹ್? ಅಥವಾ ಪ್ರಯತ್ನನೇ ಮಾಡಿಲ್ವಾ, ನಾನ್ ಕಂಡಿದ್ ಕನಸು ಬೆಟ್ಟದಷ್ಟಿತ್ತು ಈಗ ಎಣಿಸೋಕೋದರೆ ಕೈಲಿರೋ ಬೆರಳೆ ಜಾಸ್ತಿ ಅನ್ಸುತ್ತೆ, ಹೋಗಿ ನಾನೇ ಮಾತಾಡ್ಸಿ ತಪ್ಪಾಯ್ತು ಅಂತ ಕೇಳೋಕೆ ಆ ತಪ್ಪಾದರೂ ಏನು, ಕಾರಣನೇ ಇಲ್ದೆ ನಮ್ ಮಧ್ಯೆ ಬಿರುಕ್ಯಾಕೆ, ನಾನೇ ಮೇಲೆ ಬಿದ್ದು ಮಾತಾಡ್ಸೋಕೆ ಗಂಡಸು ಅನ್ನೋ ಅಹಂಕಾರಕ್ಕೆ ದೊಡ್ ಪೆಟ್ಟು ಬೀಳುತ್ತೆ ಅನ್ನೋ ಭಯನ,
ಗೊತ್ತಿಲ್ಲ ಏನ್ ಮಾಡ್ಬೇಕು ಅಂತ, ಕೇಳಲಾ ಇವಳನ್ನು ಪ್ರೀತಿಸೋಣವೇ ಮೊದಲಿಂದ ಎಂದು, ಅಥವಾ ನಮ್ಮಿಬ್ಬರ ನಡುವೆ ಇನ್ನೊಬ್ಬರು ಬಂದರೆ ಸಂಸಾರ ಸರಿಹೋಗಬಹುದೇನೋ ಎಂದು!
-ಮಿಥುನ್ ಪ್ರೀತಮ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ