ಮೊದಲಹನಿ
ಮೊದಲಹನಿಯ ಮಣ್ಣಿನ ಘಮ ಸೂಸುವಾಗ ಇರಬೇಕಿತ್ತು ನೀ ನನ್ನ ಜೊತೆ
ಮಳೆಯಲ್ಲಿ ನಾ ಮಿಂದು ಬರುವಾಗ ಇರಬೇಕಿತ್ತು ನೀ ನನ್ನ ಜೊತೆ
ಕೆಸರಿನ ರಾಡಿಯಲ್ಲಿ ನಾ ನೆಡೆವಾಗ ಇರಬೇಕಿತ್ತು ನೀ ನನ್ನ ಜೊತೆ
ಮೋಡವು ಗದರಿ ಹೆದರಿಸುವಾಗ ಇರಬೇಕಿತ್ತು ನೀ ನನ್ನ ಜೊತೆ
ಗಾಳಿಯು ತನ್ನೆಲ್ಲೆ ಮೀರಿ ಭಯ ಹುಟ್ಟಿಸಿದಾಗ ಇರಬೇಕಿತ್ತು ನೀ ನನ್ನ ಜೊತೆ
ಆದರೆ ನೀ ಇರಲಿಲ್ಲಾ ನೀ ಕೊಟ್ಟ ಮಾತಿನಂತೆ
ಮಳೆಯ ಹನಿಯೊಂದಿಗೆ ನನ್ನ ಕಣ್ಣೀರು ಜಾರಿ ಬೀಳುತ್ತಿದೆ ಧರೆಯ ಕಡೆ
ನೆನಪೆಲ್ಲಾ ಸವೆದು ಹೋಗಲಿ ವಿಗ್ರಹದ ಮೇಲಿನ ಧೂಳಿನಂತೆ
ಮತ್ತೆ ಮನಸ್ಸು ಚಿಗುರೊಡೆಯ ಬೇಕು ಭೂಮಿಗೆ ಬಿದ್ದ ಬೀಜದಂತೆ........
-ಮಿಥುನ್ ಪ್ರೀತಮ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ