ವರ್ಣನೆ

 ನಿನ್ನ ಚಂದ್ರ ಬಿಂಬದ ಮುಂಗುರುಳನ್ನು ಹೊಗಳಿದರೆ

ಕಾಮನಬಿಲ್ಲಿನಂತಹ ನಿನ್ನ ಕಣ್ಣುಬ್ಬಿಗೆ ಕೋಪ

ದಾಳಿಂಬೆ ಹವಳದಂತಹ ನಿನ್ನ ಹಲ್ಲುಗಳನ್ನು ಹೊಗಳಿದರೆ

ರಕ್ತಕೆಂಪಿನ‌ ನಿನ್ನ ತುಟಿಗಳಿಗೆ ಕೋಪ

ಸಂಪಿಗೆಯಂತಹ ಮೂಗನ್ನು ವರ್ಣಿಸಿದರೆ

ನವಿಲುಗರಿಯಂತಹ ಕಣ್ರೆಪ್ಪೆಗೆ ಕೋಪ

ಕಮಲದಂತಹ ಮುಖವನ್ನು ಹೊಗಳಿದರೆ

ಹಾವಿನ ಹೆಡೆಯಂತಹ ನಿನ್ನ ಜಡೆಗೆ ಕೋಪ

ಏನನ್ನು ವರ್ಣಿಸಲಿ ನಾ....

                     -ಮಿಥುನ್ ಪ್ರೀತಮ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮತ್ತೊಮ್ಮೆ ಪ್ರೀತಿಸೋಣ

ಆ ಕಣ್ಣುಗಳು