ಪೋಸ್ಟ್‌ಗಳು

ಮತ್ತೊಮ್ಮೆ ಪ್ರೀತಿಸೋಣ

       ಇಲ್ಲಿಗ್ ಮೂರ್ ವರ್ಷ ಆಯ್ತು ಇವ್ಳನ ಮದ್ವೆ ಆಗಿ, ಅದ್ಯಾಕೋ ನಮ್ಮಲ್ಲಿದ್ದ ಆಸೆ ಕನಸುಗಳೆಲ್ಲಾ ಪ್ರತಿ ವರ್ಷನೂ ಕಡಿಮೆ ಆಗ್ತಾ ಬರ್ತಿದೆ, ತಪ್ಪು ಯಾರಿಂದ ಶುರು ಆಯ್ತು ಅಂತ ಹುಡ್ಕೋದ್ಕಿಂತ ನಾವಿಬ್ಬರೂ ಸಮಾನಭಾಗಿಗಳು, ಹೀಗಂತ ನಮ್ ಮಧ್ಯೆ ಜಗಳ ಕಿತ್ತಾಟ ಏನ್ ಆಗಿರ್ಲಿಲ್ಲ ಒಂತರಾ ಜಗಳ ಆಗಿದಿದ್ದರೂ ಇಷ್ಟೊತ್ತಿಗೆ ಮತ್ತೆ ಒಂದಾಗ್ತಿದ್ವೇನೋ ಆದರೆ ನಮ್ ಮಧ್ಯೆ ಕಾಣದೆ ಇರೋ ಗೋಡೆ ಬೆಳೆದಿದೆ, ಇವ್ಳ್ ಜೊತೆ ಮುಂದಿನ ಜೀವನ ಸವೆಸೋದು ಬಾವಿ ಒಳಗೆ ಸೂಜಿ ಹುಡ್ಕೋ ತರ ಅನ್ನುಸ್ತಿದೆ ಹಂಗಂತ ಬಿಟ್ಟೋಗಕು ಆಗ್ತಿಲ್ಲ ಒಂತರ ನಾವಿಬ್ಬರೂ ತಾಳಿ ಅನ್ನೋ ಬೇಡಿ ಹಾಕೊಂಡು ಮದ್ವೆ ಅನ್ನೋ ಬಂಧಿಖಾನೆ ಒಳಗಿರೋ ಖೈದಿಗಳು,      ಎಲ್ಲಾರ್ ಲೈಫ್ ಕೂಡ ಹೀಗೇನಾ? ಹೊರಗಿನ ಸಮಾಜಕ್ಕೆ ಹೆದರಿ ಜೊತೆಗಿರೋ ನಾಟಕನಾ? ಇವ್ಳನ ನಾನೇ ಕೇಳಿದ್ದೆ ನಿಂಗ್ ನಾನಿಷ್ಟ ಆದ್ನ ಮದ್ವೆ ಆಗೋಕೆ ಏನು ಅಭ್ಯಂತರವಿಲ್ವಾ ಅಂತ, "ನನ್ನ ನಿನ್ನ್ ಮಗು ತರ ನೆಡುಸ್ಕಳಂಗದ್ರೆ ಮಾತ್ರ ಮದ್ವೆ" ಅನ್ನೋ condition ಹಾಕಿದ್ಲು, ಎಲ್ಲಾ ಪಿಲ್ಮ್ ನಲ್ಲಿ ತೋರ್ಸೋತರ ಮದ್ವೆ ಆದ ಮೊದಲ ದಿನಗಳಲ್ಲಿmovie shopping, road side food ವಾರಾಂತ್ಯಕ್ಕೆ ಸಾಮಾನ್ಯ ಆಗಿದ್ವು, ನಮ್ಮಿಗ್ ಮದ್ವೆ ಆಗಿದ್ರೂ ನಾವಿಬ್ಬರೂ ಪ್ರೇಮಿಗಳ್ ತರ ಇದ್ವು, ಬೆಳಗ್ಗೆ ಆದರೆ ಅವ್ಳ್ ಮುದ್ದಾದ್ ಬೈಗುಳ ಕೇಳ್ಬೇಕಾದ್ರೆ, ಸ್ನಾನ ಮಾಡಿ ತಲೆ ಕೂದಲಲ್ಲಿದ್ದ ನೀರ್ ನ ನನ್ನ್ ಮೇಲೆ ಸಿಡಿ...

ವರ್ಣನೆ

 ನಿನ್ನ ಚಂದ್ರ ಬಿಂಬದ ಮುಂಗುರುಳನ್ನು ಹೊಗಳಿದರೆ ಕಾಮನಬಿಲ್ಲಿನಂತಹ ನಿನ್ನ ಕಣ್ಣುಬ್ಬಿಗೆ ಕೋಪ ದಾಳಿಂಬೆ ಹವಳದಂತಹ ನಿನ್ನ ಹಲ್ಲುಗಳನ್ನು ಹೊಗಳಿದರೆ ರಕ್ತಕೆಂಪಿನ‌ ನಿನ್ನ ತುಟಿಗಳಿಗೆ ಕೋಪ ಸಂಪಿಗೆಯಂತಹ ಮೂಗನ್ನು ವರ್ಣಿಸಿದರೆ ನವಿಲುಗರಿಯಂತಹ ಕಣ್ರೆಪ್ಪೆಗೆ ಕೋಪ ಕಮಲದಂತಹ ಮುಖವನ್ನು ಹೊಗಳಿದರೆ ಹಾವಿನ ಹೆಡೆಯಂತಹ ನಿನ್ನ ಜಡೆಗೆ ಕೋಪ ಏನನ್ನು ವರ್ಣಿಸಲಿ ನಾ....                      -ಮಿಥುನ್ ಪ್ರೀತಮ್

ನನ್ನುಡಿಗಿ

 ಸಾವಿರ ಪದಗಳು ಸಾಲದು ಗೆಳತಿ ವರ್ಣಿಸಲು ನಿನ್ನಂದವ ಪೂರ್ತಿ ಕೂಡಿಟ್ಟಿರುವೆ ನನ್ನೆಲ್ಲಾ ಆಸೆ ಕೇಳಿಬಿಡು ಒಮ್ಮೆ ಮಾಡದೆ ನಿರಾಸೆ, ಆಗುತ್ತಿರುವಂತಿದೆ ನಾನು ಕವಿಪುಂಗವ ಇದಕ್ಕೆಲ್ಲಾ ಕಾರಣ ನಮ್ಮ ಹೃದಯ ಸಂಗಮ ನಾವಿಬ್ಬರು ಒಂದಾಗಲು ಸಮಯ ಕೂಡಿಬಂದಿದೆ ಆಗಿಬಿಡು ನಮ್ಮನೆ ಸೊಸೆ ಮರುಮಾತಾಡದೆ                                -ಮಿಥುನ್ ಪ್ರೀತಮ್ 

ಸೋತ ಪ್ರೀತಿ

 ತಿರುಗಿ ತಿರುಗಿ ನೋಡಬೇಡ ಹುಡುಗಿ ಅಳಬಹುದು ನನ್ನೀ ಹೃದಯವು ಮಂಟಪದ ಮೇಲೆ ಕುಳಿತ ನಿನಗೆ ಇರಬಾರದು ನನ್ನ ಯಾವುದೇ ನೆನಪು ಒಲ್ಲದ ಮನಸ್ಸಿನಿಂದಲೇ ಬೀಳ್ಕೊಟ್ಟಿರುವೆ ಸುಖವಾಗಿರು ಹಳೇ ಪ್ರೀತಿಯ ಮರೆತು ಕಳೆದುಹೋದ ದಿನಗಳಿಂದ ಹಾಳಾಗಬಾರದು ನಿನ್ನ ಇ ಹೊಸ ಬದುಕು.........                       -ಮಿಥುನ್ ಪ್ರೀತಮ್

ಏನೋ ಏನೋ ಆಗಿದೆ

 ಹೃದಯಕ್ಕೆ ರೆಕ್ಕೆ ಬಂದಂತಿದೆ ನಿನ್ನ ಕಣ್ನೋಟ ಕಂಡು ಕಣ್ಣುಗಳು ಮತ್ತೇ ನೋಡ ಬಯಸಿದೆ ನಿನ್ನದೇ ಮುಂಗುರುಳು                         -ಮಿಥುನ್ ಪ್ರೀತಮ್

ಮೊದಲಹನಿ

 ಮೊದಲಹನಿಯ ಮಣ್ಣಿನ ಘಮ ಸೂಸುವಾಗ ಇರಬೇಕಿತ್ತು ನೀ ನನ್ನ ಜೊತೆ ಮಳೆಯಲ್ಲಿ ನಾ ಮಿಂದು ಬರುವಾಗ ಇರಬೇಕಿತ್ತು ನೀ ನನ್ನ ಜೊತೆ ಕೆಸರಿನ ರಾಡಿಯಲ್ಲಿ ನಾ ನೆಡೆವಾಗ ಇರಬೇಕಿತ್ತು ನೀ ನನ್ನ ಜೊತೆ ಮೋಡವು ಗದರಿ ಹೆದರಿಸುವಾಗ ಇರಬೇಕಿತ್ತು ನೀ ನನ್ನ ಜೊತೆ ಗಾಳಿಯು ತನ್ನೆಲ್ಲೆ ಮೀರಿ ಭಯ ಹುಟ್ಟಿಸಿದಾಗ ಇರಬೇಕಿತ್ತು ನೀ ನನ್ನ ಜೊತೆ ಆದರೆ ನೀ ಇರಲಿಲ್ಲಾ ನೀ ಕೊಟ್ಟ ಮಾತಿನಂತೆ ಮಳೆಯ ಹನಿಯೊಂದಿಗೆ ನನ್ನ ಕಣ್ಣೀರು ಜಾರಿ ಬೀಳುತ್ತಿದೆ ಧರೆಯ ಕಡೆ ನೆನಪೆಲ್ಲಾ ಸವೆದು ಹೋಗಲಿ ವಿಗ್ರಹದ ಮೇಲಿನ ಧೂಳಿನಂತೆ ಮತ್ತೆ ಮನಸ್ಸು ಚಿಗುರೊಡೆಯ ಬೇಕು ಭೂಮಿಗೆ ಬಿದ್ದ ಬೀಜದಂತೆ........                                         -ಮಿಥುನ್ ಪ್ರೀತಮ್